ಶನಿವಾರ, ಜನವರಿ 24, 2009

(ಸಂಗ್ರಹ )


ಓ ಒಲವಿನ ಸಹೋದರಿ / ಸಹೋದರ

ಬಾಳಿನ ವಿಷಾದಗಳ ಮರೆತೊಮ್ಮೆ

ನಗೆಮಿಂಚು ಚೆಲ್ಲು ; ಕತ್ತಲಿನ ಕೋಲ್ಮಿಂಚಿನಂತೆ

ಕಷ್ಟದ ಜೀವನ ಅಲ್ಲ ನಿನಗೆ ಮಾತ್ರ

ದುಃಖ ಬೇಸರ ನೋವುಗಳದೆ ಪಾತ್ರ

ನಿನ್ನವರು ಇಲ್ಲಿ ಜೊತೆಗಾರರಲ್ಲ

ಅವರ ನಡುವೆ ಸಂತಸವ ಹುಡುಕುವುದರಲ್ಲಿ ಅರ್ಥವಿಲ್ಲ .

ಎಸೆದ ಕಲ್ಲು ಮುಳ್ಳುಗಳ ಹೆಕ್ಕಿ ಅಯಿಕೋ

ನಡೆವ haadi ಸುಗಮವಾಗಲು

ಯಶದ ಒಂದು ಮೆಟ್ಟಿಲೆಂದು ಭಾವಿಸಿಕೋ

ಅಂದಕಾರವ ನಕ್ಕು ಸ್ವಾಗತಿಸು

ದೀಪ ಹಚ್ಚಿ ಜಗವ ಸಾಧಿಸು

ಗುರಿಯೊಂದು ವಿಶಾಲ ಸಾಗರ

ಪ್ರಯತ್ನದಿಂದ ಸಿಗುವ ಸುಖದ ಆಗರ,

ಗಿಡಗಳನ್ನು ಬಗ್ಗಿಸುವ ಬಿರುಗಾಳಿಯು

ಕಲ್ಲುಕಂಬಗಳ ನಡುಗಿಸಬಲ್ಲುದೆ?

ತನ್ನೊಳಗಿನ ಮಣ್ಣು ಸಾಗಿಸುವ

ನದಿಯು ಬಂಡೆಗಳ ಸಾಗಿಸಬಲ್ಲುದೆ?

ತಲೆಕೆಳಗಾಗಿ ಹಿಡಿದರೂ

ಜ್ವಾಲೆ ಊರ್ಧ್ವಮುಖಿಯಲ್ಲ್ವೇ?

ಸಾಧಕನ ಪ್ರಯತ್ನ ಎಂಥ ತಪ್ತದಲ್ಲೂ

ಸಾಧನೆಯ ಕಡೆಗಲ್ಲವೇ ಸಹೋದರಿ/ಸಹೋದರ?

ಬೆಂಬಲಿಗರು