ಭಾನುವಾರ, ಡಿಸೆಂಬರ್ 6, 2009

ಹೊನ್ನ ಶೂಲ

ಬರಿದೇ ಹೊಗಳಿ

ಹೊಗಳಿ ಏರಿಸದಿರಿ

ಹೊನ್ನ ಶೂಲಕೆ

ಸಹಕರಿಸಬಾರದೆ

ಆಕೆಯ ಮಗುವೂ ಹೋಗಲು

ಶಾಲಾ ಅಂಗಳಕೆ?

ಗುರುವಾರ, ಡಿಸೆಂಬರ್ 3, 2009


ಲಾಲ್ಬಾಗ್


ಪುಟ್ಟು: ಈ ಗೋಡೆಯಲ್ಲಿರೋ ಪ್ರಾಣಿಗಳೆಲ್ಲ ಇದರೊಳಗಡೆ ಇದೆಯ?


ಪ್ರಾಣಿಗಳು : ಹೆದರಬೇಡಿ! ನಾವು ಲಾಲ್ಬಾಗಿನ ಗೋಡೆ ಮೇಲೆ ಮಾತ್ರ ಇದ್ದೀವಿ. ನಿಮ್ಜಾತಿಯವ್ರೆಲ್ಲ ಒಳಗಿದ್ದಾರೆ!


ಎಂಜಾಯ್ ಮಾಡಿ ....

ಭಾನುವಾರ, ನವೆಂಬರ್ 29, 2009

ಪ್ರಜಾಪ್ರಭುತ್ವ

ಕೆಲವರ
ಮನೆಬಾಗಿಲು
ಪೇಪರು ಹುಡುಗನಿಗೆ
ಪೇಪರು ಹಾಕಲು

ಕೆಲವರ
ಮನೆಬಾಗಿಲು
ಬೆಳಗ್ಗೆದ್ದು
ನೀರು ಹಾಕಿ
ರಂಗೋಲಿ ಹಾಕಲು

ನಮ್ಮ ಮನೆಬಾಗಿಲು
ಪಕ್ಕದ ಬಿಲ್ಡಿಂಗಿನವಗೆ
ಸಿಗರೇಟು ತುಂಡುಗಳನು
ಬಿಸಾಕಲು !ಶನಿವಾರ, ನವೆಂಬರ್ 28, 2009

ಪ್ರಶ್ನೆಗೊಂದು ಉತ್ತರ

ಪ್ರಶ್ನೆ: ಫೇಲ್ ಆಗ್ತೀನಿ ಅಂತ ಗೊತ್ತಿದ್ದೂ ಪರೀಕ್ಷೆಗೆ ಹೋಗ್ತೀ ಕಣೆ?
ಉತ್ತರ : ಪರೀಕ್ಷೆ ಭಯ ಹೋಗಲಿ ಅಂತ.

ಶುಕ್ರವಾರ, ನವೆಂಬರ್ 27, 2009


ಗುರುವಾರ, ನವೆಂಬರ್ 12, 2009


ಭಾನುವಾರ, ನವೆಂಬರ್ 8, 2009

ಸಾಧನೆ

ಬಾಡಿಗೆ ಮನೆ
ಬಿಟ್ಟು ಹೋಗುವಾಗ
ಮರುಗಬೇಡಿ -
ಆ ಮನೆಯಲ್ಲಿರುವಾಗ
ಮಾಡಿರುವುದು
ಸೊನ್ನೆ ಸಾಧನೆ!

ಇಂತ ಗೋಡೆಯಲಿ
ಆನಿ ಬಡಿದು
ನಿಲ್ಲಿಸಿದರಲ್ಲ
ಅದಕ್ಕೆ
ಸಲ್ಲಬೇಕಾಗಿದೆ
ಮನ್ನಣೆ!

ಹೀಗೂ ಆಗುತ್ತೆ

ಸಹಾಯ ಕೇಳಿದಾಗ
ಅಂತೀವಿ
ಅದಕ್ಕೇನು ಬಿಡು
ಬರೆಸಿಕೊಡ್ತೀನಿ
ಇಡೀ ಇಂಡಿಯಾ...

ಮತ್ತೊಮ್ಮೆ ಸಿಕ್ಕಾಗ
ಅಂತೀವಿ
ಒಹ್ !
ನೀನಿನ್ನೂ
ಇದ್ದೀಯ!

ಭಾನುವಾರ, ನವೆಂಬರ್ 1, 2009

ತಪ್ಪು

"ಪರರಲಿ ಕಂಡ
ತಪ್ಪು ನಿನ್ನಲ್ಲಿದ್ದರೆ
ಮೊದಲದನು ತೊಲಗಿಸು"
ಎಂಬ ನುಡಿಮುತ್ತು
ಓದಿದ್ದಳು ನಮ್ಮ ಮುತ್ತು!

***

ಪರರು ಮಾಡದ ತಪ್ಪುಗಳನು
ಜವಾಬ್ದಾರಿ/ಆತ್ಮಸಾಕ್ಷಿ
ನೆವದಲಿ
ಮನಃಪೂರ್ವಕವಾಗಿ
ಮಾಡುತ್ತಾ ಹೋದಳು

***

ಅಷ್ಟರಲಿ ಬೆಳಕು
ಹರಿದಿತ್ತು.
ಮಧ್ಯದಲಿ ಮುತ್ತು
ಪ್ರವಾಹದ ನೀರು
ಸುತ್ತುಮುತ್ತು.

***

ಸೋಮವಾರ, ಅಕ್ಟೋಬರ್ 26, 2009

ಹೆಜ್ಜೆ ಮೇಲೆ ಹೆಜ್ಜೆ

ಪುಟ್ಟ ಕಂದ
ಹೆಜ್ಜೆ ಮೇಲೆ ಹೆಜ್ಜೆ
ಇಡುತ ಬರುತಾನೆ

ಅಮ್ಮ ತುತ್ತು
ಕೊಡುತ್ತಾಳೆಂದು
ಆಸೆಯಿಂದ !

ತಾತ ಹೆಜ್ಜೆ ಮೇಲೆ
ಹೆಜ್ಜೆ ಇಡುತಾ
ಬರುತಾರೆ
ಪಿಗ್ಮಿ ಕಲೆಕ್ಶನಿಗೆ

ಇಲ್ಲದಿರೆ
ಸೊಸೆ ತುತ್ತು
ಕೊಡಲ್ಲ
ಎಂಬ ಭಯದಿಂದ !


ಅಣ್ಣ ಕೊಟ್ಟ ಪರ್ಸನಲ್ ನಂಬರ್

ತಂಗಿ ನೀ ಲಕ್ಕಿ
ಆದ್ರೆ
ಪರ್ಸನಲ್ ನಂಬರಿಗೆ
ಅಣ್ಣನೆ ಓಗೊಡುತ್ತಾನೆ!
ನೀ ಅವಲಕ್ಕಿ
ಆದ್ರೆ
ವಾಚ್ಮನ್
ಈ ಫೋನ್ ಅಣ್ಣಾವ್ರು
ನಂಗೆ ಕೊಟ್ಟಿದ್ದಾರೆ
ಅನ್ನುತ್ತಾನೆ!

ತಿಳಿದೂ ತಿಳಿಯದಂತಿರುವುದು

ಜೀವನದಲಿ
ನೋವಿಲ್ಲದ
ಮನಸೇ ಇಲ್ಲ

ನಗುವಿಲ್ಲದ
ಮೊಗವೇ ಇಲ್ಲ

ನಗುವ ಮೊಗದ
ಹಿಂದೆ ನೋವೆಂಬ
ಮನಸ್ಸು
ಇದ್ದೆ ಇರುತ್ತೆ

(ತಮ್ಮನ ಎಸ್ಸೆಮ್ಮೆಸ್ಸು)

ಇಷ್ಟವಾದ ಯೆಸ್ಸೆಮ್ಮೆಸ್ಸು

ಸಣ್ಣ
ಕೋಪ

ಪುಟ್ಟ
ವೈಮನಸ್ಸು
ತರ್ಲೆ
ಎಸ್ಸೆಮ್ಮೆಸ್ಸು

ಪ್ರೀತಿಯ
ಭಾವನೆ
ಒಂದಷ್ಟು
ಕಾಳಜಿ

ಸೊನ್ನೆ
ಸುಳ್ಳು

ನೂರಾರು
ಸಾರೀ
ಮತ್ತು ಥ್ಯಾಂಕ್ಸ್
ಸೇರಿದರೆ
ಅದೇ

ಪ್ರೀತಿಯ
ಗೆಳೆತನ .....

ಸೈನೈಡ್

ಬದುಕ ಸಹಿಸಲಾಗದೆ
ಮಾಡಿಕೊಳ್ಳುತ್ತಾರೆ
ಸುಸೈಡ್ !
ಬದುಕ ಸಹಿಸುತ
ಬದುಕಿದವಗೆ
ಕೊಡುತ್ತೇವೆ
ಅವಮಾನವೆಂಬ
ಸೈನೈಡ್ !

ಬುಧವಾರ, ಅಕ್ಟೋಬರ್ 21, 2009

ಪರೋಟ

ಆಕೆಯ ಮಾತು ಪರೋಟದಂತೆ
ಅದರಲಿ ಹಲವಾರು ಪದರು
ಸತ್ಯದ ಪದರು ನಾವೇ
ಚಿಂತಿಸಿ ಮಂಥಿಸಿ
ತಿಳಿದುಕೊಳ್ಳಬೇಕಷ್ಟೇ

ತಿಳಿಯದೆ
ಸತ್ಯವೆನುವುದು
ಬೂದಿ ಮುಚ್ಚಿದ
ಕೆಂಡದಂತೆ !

ಎಷ್ಟು ಮುಚ್ಚಿಟ್ಟರೂ
ಒಂದು ದಿನ ತಿಳಿದೇ
ತಿಳಿಯುತ್ತೆ!ಸೋಮವಾರ, ಅಕ್ಟೋಬರ್ 19, 2009

ತಮ್ಮನ ಪದ್ಯ

ನೋಟ

ನೋಟ ನೋಟಗಳು
ಸೇರಿತು ....

ನೋಟ ನೋಟಗಳು
ಸೇರಿತು ......

ನೋಟು ನೋಟುಗಳು
ಸೋರಿತು !!!!!

ಮಂಗಳವಾರ, ಅಕ್ಟೋಬರ್ 13, 2009


ಗುರುವಾರ, ಅಕ್ಟೋಬರ್ 8, 2009

ಮಂಗಳವಾರ, ಸೆಪ್ಟೆಂಬರ್ 29, 2009


ನಂಬಿಕೆ

ಪುಟ್ಟಿ : ಮೇಷ್ಟ್ರೇ ನನಗೊಂದು ಅಂಥ ಪುಸ್ತಕ ಹುಡುಕಿಕೊಡ್ತೀರಾ?
ಮೇಷ್ಟ್ರು : ಹುಡುಕ್ತಾ ಇದ್ದೀನಿ.
(ಕೆಲ ದಿನಗಳ ಬಳಿಕ)
ಪುಟ್ಟಿ : ಮೇಷ್ಟ್ರೇ ಹುಡುಕ್ತಾ ಇದ್ದೀನಿ ಅಂದಿದ್ದರಲ್ಲ ಏನಾಯ್ತು?
ಮೇಷ್ಟ್ರು : ನಾನಂದಿದ್ದನ್ನ ನೀನೇಕೆ ನಂಬಿದ್ದು? ನಾನು ನನ್ನ ಅಕ್ಕನ ಮಕ್ಕಳಿಗೆನೆ ಹುಡುಕಿ ಕೊಟ್ಟಿಲ್ಲ! ನಾನೇನು ನಿನಗೆ ಸಂಬಂಧಿಯಾ?
ಪುಟ್ಟಿ : ಸಂಬಂಧಿ ಅಲ್ಲ.. ಮೇಷ್ಟ್ರೇ ಹೀಗೆ ಅವತ್ತೇ ಹೇಳಬಹುದಿತ್ತಲ್ಲ?
(ಪುಟ್ಟಿ ಅಳುತ್ತಾ ಹೋಗುವಳು)
ಮೇಷ್ಟ್ರಮ್ಮ : ಅವರು ಯಾಕಾದರೂ ಹಾಗೆ ಹೇಳಿದರಾ..

ಮೇಷ್ಟ್ರ ನೀತಿ : ಅಂದಾಡಿದ ಮಾತು ಅಂದಿಗೆ ಇನ್ದಾಡಿದ ಮಾತು ಇಂದಿಗೆ, ಆಗ ಆಡಿದ ಮಾತು ಆವಾಗಕ್ಕೆ, ಈವಾಗ ಆಡಿದ ಮಾತು ಈವಾಗಕ್ಕೆ... ಹೀಗಿರುವಾಗ ನಂಬಿಕೆ ಎಂಬ ಪದದ ಚಿಂತೆ ಯಾತಕೆ?

ಮಂಗಳವಾರ, ಸೆಪ್ಟೆಂಬರ್ 1, 2009

ಮಾನಸಲೋಕದ ಅಪ್ಪಂದಿರು

ಆಕೆ ಭ್ರಮಿಸಿದಳು
ಅವರು ಕೊಡಬಹುದೆಂದು
ಬಾಳಿಗೊಂದು ಬೆಳಕ !
ಆದರೆ ಅವರು
ಕೊಟ್ಟರೊಂದೊಂದು ಪುಳಕ !
ಅದರಲಿ ಮಾಡುತ್ತಾ
ಹೋದರು ಜಳಕ !

ಸೋಮವಾರ, ಆಗಸ್ಟ್ 31, 2009


ಬುಧವಾರ, ಆಗಸ್ಟ್ 26, 2009


ಬುಧವಾರ, ಆಗಸ್ಟ್ 19, 2009ಮಂಗಳವಾರ, ಆಗಸ್ಟ್ 18, 2009

ತಿಳಿದಿರಲಿ ನವ ತರುಣಿಯೆ

ಪರ ಸೊತ್ತು
ತರುವುದು ಆಪತ್ತು

ಪರರ ಪತಿಯ
ಹಿಂದೆ ಬಿದ್ದರೆ
ಕಾದಿದೆ ವಿಪತ್ತು
....

ಅತ್ತಿ ಹಣ್ಣು
ನೋಡಲು ಬಲು ಚೆನ್ನವು
ಅದ ಕಂಡ ಕೂಡಲೇ
ಅದರ ಹಿಂದೆ ಬೀಳುವುದು
ಸಹಜ ಗುಣವು ....

ಅದರಲಿ ಹುಳುಗಳಿವೆ
ಎಂದರಿತೂ ಅದರದೇ
ಹಿಂದೆ ಬೀಳುವುದು
ನಿನ್ನ ಆತ್ಮಾಭಿಮಾನವ
ತಿಂದು ಬಿಡುವ
ಹುಳುಗಳ ಸೂಚಕವು ....

ನಿನ್ನ ಪ್ರೀತಿ
ಪರರ ಸೊತ್ತು ಆದರೆ
ಹುಳು ತುಂಬಿದ
ಅತ್ತಿ ಹಣ್ಣನ್ನು
ಎಸೆಯುವಂತೆ
ಎಸೆದು ಬಿಡು
ತಿರುಗಿ ಬಾರದಂತೆ

ಹಸನಾದೀತು
ನಿನ್ನ ಬಾಳು ....

ಹಾಗೆ ಆತನ
ನ೦ಬಿದವರದು ....

ಜೋಕು

ಹೂವು ಚೆಲುವೆಲ್ಲಾ ತಾನೆಂದಿತು....
ಹೆಣ್ಣು ಹೂವ ಮುಡಿದು
ಚೆಲುವೇ ತಾನೆಂದಿತು....

ಸಹೋದ್ಯೋಗಿ
ತಾನು ಮಾಡಿರುವುದು ಸರಿ ಎಂದನು .....
ತಪ್ಪುಗಳ ಕಂಡ ಕೂಡಲೇ
ಅದೆಲ್ಲ ಅವಳದೆನ್ದನು...

ಕಾಲೇಜು


ಶನಿವಾರ, ಆಗಸ್ಟ್ 8, 2009


ಆಧುನಿಕ ಗುರುಗಳಿಗೆ

ಗುರುಗಳೇ ,

ಜಾರು ದಾರಿಯಲ್ಲಿರುವಳು

ನನ್ನ ಮಗಳು

ಜಾರದಂತೆ ಕಲಿಸಿ ಬುದ್ಧಿ

ತಪ್ಪಿದರೆ ಒಂದೆರಡು ಗುದ್ದಿ

ಆಗದಿರಲಿ ಆಕೆ ಒಂದು ರದ್ದಿ !

ಗುರುವಾರ, ಜುಲೈ 23, 2009


ಸೋಮವಾರ, ಜುಲೈ 20, 2009


?


ಗುರುವಾರ, ಜುಲೈ 9, 2009


ಮುಂದಿನ ಹೆಜ್ಜೆ

ಮುಂದಿನ ಹೆಜ್ಜೆ
ಅದಕಿರಲಿ
ನವ ನವೀನ ಗೆಜ್ಜೆ

ಅದರಿಂದ
ಮೂಡಿಬರಲಿ
ಸುನಾದ

ಕೇಳದ೦ತಾಗಲಿ
ಆರ್ತನಾದ !

ತಾಯಿಯ ಕನಸು

ಯೌವ್ವನವೇ
ನೀ ಬರುತಿರು
ಧರೆಗೆ ಬೀಳುವಂತೆ
ಸೋನೆ ಮಳೆ

ಆದರೆ
ಹಾಳಾಗದಿರಲಿ
ಬೆಳೆಸಿದ ಬೆಳೆ
ಆಗದಿರಲಿ
ಯಾವುದೇ ಕೊಲೆ

ನವ ಯುವ ಜನಾಂಗ

ಯೌವ್ವನ ತರಲಿ
ನವ ನವ
ಕನಸುಗಳ ಯಾನ

ಆದರೆ ಕೆಸರೊಳಗೆ
ಕಾಲೂರದಂತೆ
ಜಾಗೃತವಾಗಿರಲಿ ಮನ

ಬುಧವಾರ, ಜುಲೈ 8, 2009ಶುಕ್ರವಾರ, ಜುಲೈ 3, 2009
ಚಿತ್ರಗಳು ಮೈಲ್ನಿಂದ


ಗುರುವಾರ, ಜುಲೈ 2, 2009

ಒಂದು ಬೆಳಗು


ಸೋಮವಾರ, ಜೂನ್ 29, 2009
ಆಡು ಆಟ ಆಡು


ಹುಡುಗಿ


ಜೋಕಾಲಿ


ಮಂಗಳವಾರ, ಜೂನ್ 23, 2009

ದೂರ ದಾರಿ


ಶುಕ್ರವಾರ, ಜೂನ್ 19, 2009

ಬಾಳ ದಾರಿ


ತಾಯಿ - ಮಗು


ಮಂಗಳವಾರ, ಜೂನ್ 16, 2009

ಆಕಾಶ ತಲೆಮೇಲೆ ....

ಪಾಪು ಪ್ರಪಂಚ


ಶುಕ್ರವಾರ, ಜೂನ್ 12, 2009

ತಿಮ್ಮ ಮತ್ತು ಅಕ್ಕ


ಪರೀಕ್ಷೆ

ತಿಮ್ಮ : ಯಾವಾಗಕ್ಕ ಪರೀಕ್ಷೆ?
ಅಕ್ಕ : ನಾಡಿದ್ದು.
ತಿಮ್ಮ : ಮತ್ತೆ, ಈವಾಗಲೇ ಓದ್ತಾ ಇದ್ದಿ, ಮರ್ತೋಗುತ್ತೆ ನೋಡು!

ಸ್ಕೂಲು ಬ್ಯಾಗ್


ಬುಧವಾರ, ಜೂನ್ 10, 2009

ತುಂಟಿ


ಪಕ್ಕದ್ಮನೆ ತುಂಟಿ

ತುಂಟಿ : ಅಮ್ಮ, ನನಗೆ ಬಾಕಿ ಇದ್ದ ನೋಟ್ಸ್ ತಂದುಕೊಡು.
ಅಮ್ಮ : ಸಂಬಳ ಆಗ್ಲಿ ತಂದುಕೊಡ್ತೀನಿ.
ತುಂಟಿ : ನಿನ್ ಬಾಸ್ ನಂ ಸ್ಕೂಲು ಮುಗಿದ ಮೇಲೆ ಸಂಬಳ ಕೊಡ್ತಾನೆ. ಹಾಂಗಾರೆ ಆಗ ನೀನು ನೋಟ್ಸ್ ತಂದು ಕೊಡ್ತೀಯ?

ಚಿಕ್ಕಿ - ಚುಕ್ಕಿ


ಚುಕ್ಕಿ

ಚಿಕ್ಕಿ ಕರೆಯಿತು -
ಬಾ ಬಾ ಚುಕ್ಕಿ
ಬಣ್ಣದ ಚುಕ್ಕಿ
ಬೆಳ್ಳಗೆ ಬೆಳಗುವ
ಚಂದದ ಚುಕ್ಕಿ .

ಚುಕ್ಕಿ ಅಲ್ಲಿಂದಲೇ -
ಲೇ ಯಾರೆಲೆ ಚಿಕ್ಕಿ
ಹೋಗೆಲೇ ಚಿಕ್ಕಿ
ನನಗಿದೆ ಇಲ್ಲಿ
ಬಗೆಬಗೆ ಪಲ್ಲಕ್ಕಿ .

ಚಿಕ್ಕಿ ಹೇಳಿತು ಬಿಕ್ಕಿ -
ಸರಿ ಸರಿ ಚುಕ್ಕಿ
ನೀನೆ ಸರಿ ಚುಕ್ಕಿ
ನಿನಗಿದೆ ಪಲ್ಲಕ್ಕಿ
ನಾನದರಲಿ ಅವಲಕ್ಕಿ .

ಆದರೂ ಹೇಳಿ ಬಿಡು
ನಿನ್ನಹಂಕಾರದ ಮೂಲ .
ಯಾವುದದು
ನೀ ತಿನ್ನೋ ಅಕ್ಕಿ !

ಸೋಮವಾರ, ಜೂನ್ 8, 2009


ಭಾನುವಾರ, ಜೂನ್ 7, 2009

......


ಬುಧವಾರ, ಜೂನ್ 3, 2009


ಮಂಗಳವಾರ, ಜೂನ್ 2, 2009


ಬೆಂಬಲಿಗರು

ಬ್ಲಾಗ್ ಆರ್ಕೈವ್