ಮಂಗಳವಾರ, ಡಿಸೆಂಬರ್ 16, 2008

ಭಾವನೆಗಳು

ಭಾವನೆಗಳೇ ಜೀವ

ಎನ್ನಲೊಂದು ಕಾಲ

ಭಾವನೆಗಳು ಬರdu

ಎನ್ನಲೊಂದು ಕಾಲ

ಎಲ್ಲದಕ್ಕೂ ಮಾನವನ

ಮನಸ್ಸೇ moola

ಸೋಮವಾರ, ನವೆಂಬರ್ 24, 2008

ಅನಿವಾರ್ಯತೆ

ಕೆಲವೊಮ್ಮೆ
ಸಹಾಯ ಬಯಸಿ ಬಂದವರಿಗೆ
ನಮ್ಮದೇ ಕೈತುಂಬಾ ಇದೆ
ನೀವು ಹೋಗಿ ಅನ್ನಲಾಗುವುದಿಲ್ಲ
ಬದಲಾಗಿ ಮಾಡೋಣ ಹೋಗಿ
ಎಂದರೆ ಸುಖಾಂತ್ಯ.

ಸೋಮವಾರ, ನವೆಂಬರ್ 10, 2008

ಭಾವನೆಗಳು

ಹೃದಯ ತಟ್ಟುತ್ತವೆ

ಮನದ ತುಂಬಾ ಮುತ್ತಿಕ್ಕುತ್ತವೆ

ಹಿಡಿಯಲು ಹೋದರೆ

ಕಾಮನ ಬಿಲ್ಲುಗಳು ಆಗುತ್ತವೆ


ಗುರುವಾರ, ನವೆಂಬರ್ 6, 2008

ಪೋಲು

ಪೋಲು ಮಾಡುತ್ತವೆ
ಕಣ್ಣುಗಳು ಕಣ್ಣೀರ
ತನ್ನವನಾ (ಳಾ)ಗುವ
ಭ್ರಮೆಯಿಂದ
ಪರಪುರುಷನಿಗೆ /
ಪರಸ್ತ್ರೀಗೆ.

ಪ್ರೀತಿ

ಪ್ರೀತಿಗಿಲ್ಲ
ನೀತಿ ನಿಯಮ
ಇರಬೇಕಾದುದಕ್ಕೆ
ಒಂದೇ
ಸಂಯಮ.

ಶನಿವಾರ, ಅಕ್ಟೋಬರ್ 25, 2008

ದಾಂಪತ್ಯ

ನೀರೂರಿಸುವ ಸಿಹಿ, ಹುಳಿ

ಖಾರಗಳಿದ್ದರೂ ಸುತ್ತಮುತ್ತ

ದಂಪತಿಗಳು ಕಣ್ಣುಮುಚ್ಚಿ

ಪಾಲಿಸಬೇಕಾದ

ಕಟ್ಟುನಿಟ್ಟಿನ ಪಥ್ಯ!

ಧಾರೆ

ಎಲೆ ನೀರೆ

ಎರೆಯದಿರು

ಸರ್ವವನು ಧಾರೆ...

ನಿನಗಾಗದೆ

ಆತನೊಡನೆ

ಧಾರೆ.

ಬೆಂಬಲಿಗರು