ಸೋಮವಾರ, ಮಾರ್ಚ್ 30, 2009

ಗಂಡನೂ ಫ್ಯಾನೂ

ಗಂಡನೂ ಫ್ಯಾನೂ
ಒಂದೇ ಅಲ್ಲವೇನೂ...

ಕೆಲವು ಫ್ಯಾನುಗಳು
ಮಾಡುತ್ತಿರುತ್ತವೆ
ಪರಪರ...

ಕೆಲವು ಫ್ಯಾನುಗಳು
ಗೊತ್ತೇ ಮಾಡುವುದಿಲ್ಲ
ಭುವಿಯಲ್ಲಿದೆ ಎಂದು
ತಮ್ಮ ಇರ....

ಪರರ ಪರಪರದಿಂದ
ಎಚ್ಚತ್ತುಕೊಳ್ಳುವ ,
echchattukonDaruu
ನಿಟ್ಟುಸಿರಿಟ್ಟು ಸುಮ್ಮನಾಗುವ
ಅಸಹಾಯಕರು...

ಶುಕ್ರವಾರ, ಮಾರ್ಚ್ 27, 2009

ಕನಸು

ಕನಸ ಹುಟ್ಟುಹಾಕಲು
ಬಹುಮಂದಿಯು
ನನಸಾಗಿಸಲು
ಹೋದರಾಗುವುದು
ಮನಸೊಂದು ಚಿಂದಿಯು!

ಬುಧವಾರ, ಮಾರ್ಚ್ 25, 2009


ದುನಿಯಾ

ದುನಿಯಾದ
ಲಾಂಗು ಮಚ್ಚುಗಳಿಂದ
ಹಿಡಿದು ಹುಚ್ಚು
ಸಾಹಿತ್ಯ ಲೋಕಕ್ಕೆ
ಒಳಹೊಕ್ಕರೆ ಅಲ್ಲೂ
ಅಕ್ಷರ-ಅಕ್ಷರಗಳಿಂದ
ಹಿಡಿದಿಡಿದು ಚುಚ್ಚು !!

ಬೆಂಬಲಿಗರು