ಗುರುವಾರ, ಮೇ 28, 2009

ಸಂವಾದ


ಬುಧವಾರ, ಮೇ 27, 2009

ಲೆಕ್ಕ

ಮನವು ಲೆಕ್ಕ
ಹಾಕುತಿದೆ
ಪ್ರೀತಿಯ ಅಕೌಂಟ್ !
ಎಷ್ಟಿದೆ ಅದರಲ್ಲಿ
ಎಮೌಂಟ್ !

ಸಿಕ್ಕಿರುವುದು
ಡೈರೆಕ್ಟ್ ಪ್ರೀತಿಯೆಂದರೆ
ಬಾಲ್ಯದಿಂದಲೂ
ಹೆಂಗಳೆಯರದೆ

ಪ್ರಥಮ
ಪುರುಷ ಪ್ರೀತಿಯಾದ
ಅಪ್ಪನೇ
ಮಾಡಿದ ಬೋಣಿ
ತಪ್ಪಿಸಲು
ಪ್ರೀತಿಯ ಏಣಿ

ಹೀಗಿರುವಾಗ
ಇನ್ನೆಲ್ಲಿ ಸಿಕ್ಕೀತು
ಅಪೇಕ್ಷಿಸಿದ
ಪ್ರೀತಿಯ ದೋಣಿ ?

ಕೇಳೋಣವೆಂದರೆ
ಬ್ರಹ್ಮದೇವನ
ಹೇಳಿಯಾನು -
ನಾನೂ ಒಂದು
ಪುರುಷ ಪ್ರಾಣಿ!ಒಂದು ಸಂಸಾರ

ಹುಟ್ಟಿದ ಸುದ್ದಿ
ಕೇಳಿಯೂ
ನೋಡಬೇಕೆನಿಸಲಿಲ್ಲ ಅವಗೆ
ನಂತರವೂ
ಅಪ್ಪಾ... ಎಂದು
ಕರೆಸಿಕೊಳ್ಳಲೇ ಇಲ್ಲ


ಸಿಟ್ಟು ಬಂದಾಗ
ಎಲ್ಲಾ ನಿನ್ನಿಂದಲೇ
ಆದದ್ದು ಎಂದು
ಆತನ ತಾಯಿಗನ್ನಲು
ಕೈಯನ್ನು ನೆಲಕ್ಕೆ
ಬಡಿಯುತ್ತಿರಲು
ಮಡದಿಯ ಕಾಲುಗಳು
ಕಂಪಿಸುತ್ತಿದ್ದವಂತೆ.

ಅಷ್ಟರಲ್ಲಾಗಲೇ
ಜೀವನದಿ ವಿರಕ್ತಿ ಬಂದು
ಹಲವು ವರುಷಗಳೇ
ದಾಟಿ ಸಂದಿದ್ದವು.

ಮುನಿಗಳು ಎಂದರೆ
ಹೇಗಿರುತ್ತಾರೆ ಎಂಬ
ಚಿಕ್ಕ ಮಕ್ಕಳ ಪ್ರಶ್ನೆಗೆ
ಉತ್ತರ ಎಂಬಂತಿದ್ದ
ಅಪ್ಪನದು
ಗಾಢ ಮೌನದಲ್ಲೇ
ಜೀವನಯಾತ್ರೆಯೂ
ಮುಗಿಯಿತು.

ಹೀಗೆ ಸಂಸಾರದ
ನೊಗವ ಹೊತ್ತಾಕೆ
ಸುಸ್ತನ್ನು ಬದಿಗಿಟ್ಟು
ದುಡಿದಳು ಮಕ್ಕಳ
ಬೆಳೆಸಿದಳು.

ಮಂಗಳವಾರ, ಮೇ 26, 2009

.....


.....


....


....


ಬುಧವಾರ, ಮೇ 20, 2009ಸೋಮವಾರ, ಮೇ 18, 2009

..


ಹಳ್ಳಿಯೇ, ಇರಬೇಕಿತ್ತು ನಾ ನಿನ್ನಲ್ಲಿಯೇ


ತಂದಿತು ಬದುಕು
ಚಿಂದಿಯನು ಪೇಟೆಗೆ
ಆಧುನಿಕ ಜನ
ತುಂಬಿರುವ ಕೋಟೆಗೆ

ಮನವೆಂದಿತು ಮೆಲ್ಲಗೆ
ಪರವಾಗಿಲ್ಲ ಎಲ್ಲಿದ್ದರೇನು ?

ಹಾಯಾಗಿರಲು
ಬದುಕುಂಟು
ಬದಲಾಗದು
ನಿನ್ನ ಅಕೌಂಟು

ದಿನಗಳು ಸಾಗಿದವು
ಒಂದು ಎರಡು....
ಕಳೆದೋಯಿತೊಂದು ವರ್ಷ


ಹಳ್ಳಿಗೂ ದಿಲ್ಲಿಗೂ ಇಲ್ಲ
ಯಾವುದೇ ಧಿಮಾಕು
ಅವುಗಳಿಗಿವೆ ತಮ್ಮವೇ
ಆದ ನಯ, ನಾಜೂಕು

ಇಂತಿರುವಾಗ
ಬಂದಳವಳು ಪರಿಮಳೆ
ತನ್ನೊಳಗೆ ತುಂಬಿಕೊಂಡು
ಬಗೆಬಗೆಯ ಸೊಳೆ

ಚಿಂದಿಯು ಉಸುರಿದಳು
ಆಗಲೇ - ಹಳ್ಳಿಯೇ
ನಾನಿರಬೇಕಿತ್ತು ನಿನ್ನಲ್ಲಿಯೇ....


ಕಾಮನಬಿಲ್ಲು


ಹಿರಿಯರೆಂದರು
ಬದುಕೊಂದು ಕಾಮನಬಿಲ್ಲು
ಬಿಡದಿರು ನೀನು
ಮನದಲ್ಲೇ ಸೈಕಲ್ಲು

ನನಗ್ಗೊತ್ತಿಲ್ಲ...
ನೀನಲ್ಲಿ ಮಂಗಗಳ
ಕುಣಿಸುತ ನಿಲ್ಲು
ಆದರೆ
ಅಲ್ಲಿಂದಲೇ ಫಳಫಳಿಸುತ್ತಿರಲಿ
ಝಗಮಗನೆ ಹಲ್ಲು !

ನೀ ಭೇಟಿಯಾಗೋಣ
ಬಾರೆ ಅಂದರೆ
ಸಂತಸದಿ ಮಿನುಗೀತು
ನನ್ನ ಹಳೆಯ ಪಲ್ಲು !

(ಪಲ್ಲು = ಸೆರಗು)

ಮಂಗಳವಾರ, ಮೇ 12, 2009

ಒಂದು ಉಲ್ಟಾ ಪದ್ಯ

ನಾವು
ನಂಬಿಕೆ ದ್ರೋಹಗೈದಿದ್ದರೂ
ನಾವೆದುರಾದಾಗ
ನಮಸ್ಕರಿಸುತ್ತಾರವರು
ಒಂದೊಮ್ಮೆ ಮಾಡಿದ
ನಂಬಿಕೆ ದ್ರೋಹ
ಮರೆತುಹೋಗಿ

ನಮ್ಮ ಸಂಸ್ಕೃತಿ
ಎಂದೋ ಹೇಳಿದ
ನೀತಿಯನು
ಅವರು ನಂಬಿ
ಅದವರ ರಕ್ತದಲಿ
ಬೆರೆತುಹೋಗಿ !

..........


ಸೋಮವಾರ, ಮೇ 11, 2009

ತಾಯಿಗೊಂದು ದಿನ !ಇತ್ತೀಚೆಗಷ್ಟೆ ಊರ ಜಾತ್ರೆಗೆ ಹೋದಾಗ ಏಕೈಕ ಪುತ್ರ ಹೋಗಿ ಜಾತ್ರೆಯ ಲೆಕ್ಕಕ್ಕೆ ಮಂಡೆ ಬೋಳಿಸಿಕೊಂಡು ಬಂದು ತಾಯಿಯ ಎದುರು ಹಾದುಹೋದ ಒಳಗಿನ ಪಡಸಾಲೆಗೆ. ಹೊರಗಿನ ಹಜಾರದಲ್ಲಿ ಹಬ್ಬದ ಸಂಭ್ರಮವಿತ್ತು ಅಲ್ಲಿಯತನಕ. ಅಜ್ಜಿಯು ಸೊಸೆ, ಮೊಮ್ಮಕ್ಕಳೊಂದಿಗೆ ಹರಟೆ ಹೊಡೆಯುತ್ತಿದ್ದಳು.

ಮಗ ಒಳಹೋಗುವಾಗ ಆತನ ಎಡಬದಿಯ ಬೋಳುಮಂಡೆಯ ಕಡೆಗೊಮ್ಮೆ ದೃಷ್ಟಿ ಹಾದುಹೋದದ್ದೇ ತಡ, ಬೋರೆಂದು ಅಳತೊಡಗಿದಳು. ಸುತ್ತಮುತ್ತ ಕುಳಿತ ಸೊಸೆ, ಮಕ್ಕಳು ಕಂಗಾಲು. ಏನು ಎಂದು ಪರಿಪರಿಯಿಂದ ಸೊಸೆ ಮೊಮ್ಮಕ್ಕಳು ಕೇಳಲು ಮಗನ ಕಡೆ ಕೈ ತೋರಿಸುತ್ತಾಳೆಯೇ ವಿನಃ ಆಕೆಯ ಬಾಯಿಯಿಂದ ಪದಗಳು ಹೊರಡುವುದಿಲ್ಲ.

ಹೇಳಜ್ಜಿ, ಹೇಳಜ್ಜಿ ಏನಾಯಿತೆಂದು ಕೇಳಿದರೂ, ಅಜ್ಜಿ ಬಾಯಿ ಬಿಡುವುದಿಲ್ಲ, ಚಿಕ್ಕ ಮಕ್ಕಳಂತೆ ಮಗನ ಕಡೆ ಕೈ ತೋರಿಸುತ್ತಾಳಷ್ಟೇ. ಈಗ ಅಪ್ಪನ ಕೈಯಿಂದ ಈ ಅಜ್ಜಿ ಪೆಟ್ಟು ಹೊಡೆಸುತ್ತಾಳೆನ್ದು ಒಂದೊಂದೇ ಮೊಮ್ಮಕ್ಕಳು ಕಾಲು ಕೀಳತೊಡಗಿದವು.

ಕೊನೆಯ ಪ್ರಯತ್ನವೆಂಬಂತೆ ಸೊಸೆ ಅತ್ತೆಯ ಪಕ್ಕಕ್ಕೆ ಬಂದು "ಅತ್ತೆ , ಏನು ಜಾತ್ರೆಯ ದಿನ ನಿಮ್ಮ ಮಗನ ಕೈಯಲ್ಲಿ ನನಗೆ ಪೆಟ್ಟು ಹೊಡೆಸುವ ಅಂದಾಜ ನಿನ್ನದು, ಏನಾಯ್ತು ಹೇಳು, ಇಲ್ಲದಿದ್ದರೆ ನಾನು ನಿನಗೆ ಏನೋ ಹೇಳಿದೆ ಎಂದು ನನಗೆ ಬಡಿಯುತ್ತಾರತ್ತೆ, ಹೇಳತ್ತೆ" ಅಂದಾಗ, ಅಷ್ಟರಲ್ಲಿ ಮಗ ಹೊರಬರುತ್ತಾನೆ, ಪುನಃ ಬಿಕ್ಕತೊಡಗುತ್ತಾಳೆ.

"ನೋಡೇ, ಆ .... ಆ... ಆ.. ಕಲೆ ಇನ್ನೂ ಹೋಗಿಲ್ಲವಲ್ಲೇ.... " ಎಂದು ಪುನಃ ಬಿಕ್ಕತೊಡಗಿದಳು.

ಹಲವು ದಶಕಗಳ ಹಿಂದೆ ಅಮ್ಮ ಕೂಲಿ ಕೆಲಸ ಮಾಡಿ ಬಂದು ಬೆಲ್ಲದ ಡಬ್ಬ ನೋಡಲು, ಮಗ ಬೆಲ್ಲ ತಿಂದು ಖಾಲಿ ಡಬ್ಬ ಇಟ್ಟಿರುತ್ತಾನೆ. ತಾಯಿ ಸಿಟ್ಟುಗೊಂಡು ಅದೇ ಡಬ್ಬದಿಂದ ಮಗನ ತಲೆಗೆ ಹೊಡೆದು ರಕ್ತ ಆತನ ಮುಂಗೈಯಲ್ಲಿ ಹರಿಯುವಾಗಲೇ ತಿಳಿಯುತ್ತದೆ, ಅವಳು ಹೊಡೆದ ರಭಸ. ಆ ಕಲೆ ಕ್ರಮೇಣ ಕೂದಲಿಂದ ಮರೆಯಾಗಿದ್ದು, ಬೋಳು ಮಂಡೆ ಮಾಡಿದಾಗ, ಆ ಕಲೆ ಕಂಡು ತಾಯಿಯ ಹೃದಯ ಬಿರಿಯುತ್ತದೆ.

ವಾತಾವರಣ ತಿಳಿಯಾದುದನು ಸಂದಿ ಗೊಂದಿಗಳಲಿ ಇಣುಕುತ್ತಿದ್ದ ಪುಟ್ಟ ಮಕ್ಕಳು "ಓ..... ತಟ್ಟೆ ಹಾಕಮ್ಮಾ ....." ಎನ್ನುತ್ತಾ ಅಜ್ಜಿಯ ಕೊರಳಿಗೆ ಜೋತುಬಿದ್ದವು.
ಸೊಸೆ ಬೆವರು ಒರಸಿಕೊಂಡಳು.

*****

ಪ್ರಕೃತಿ


ಭಾನುವಾರ, ಮೇ 10, 2009

................


ಗುರುವಾರ, ಮೇ 7, 2009

ಆಧುನಿಕತೆ


..............


ನೀನೆ ವಾಸಿ

ಆಗ್ತೀನಿ ಕಣೋ
ಆಗ್ತೀನಿ ಕಣೋ
ಎಂದು
ಮದುವೆಯ ಮುನ್ನ
ಬೇರೆಯವರ ವರಿಸಿದ
ನೀನೆ ವಾಸಿ ಕಣೆ

ಬುಧವಾರ, ಮೇ 6, 2009

ಮಂಗಳವಾರ, ಮೇ 5, 2009

ಜೀವ


ಬೆಂಬಲಿಗರು