ಬುಧವಾರ, ಮೇ 27, 2009

ಲೆಕ್ಕ

ಮನವು ಲೆಕ್ಕ
ಹಾಕುತಿದೆ
ಪ್ರೀತಿಯ ಅಕೌಂಟ್ !
ಎಷ್ಟಿದೆ ಅದರಲ್ಲಿ
ಎಮೌಂಟ್ !

ಸಿಕ್ಕಿರುವುದು
ಡೈರೆಕ್ಟ್ ಪ್ರೀತಿಯೆಂದರೆ
ಬಾಲ್ಯದಿಂದಲೂ
ಹೆಂಗಳೆಯರದೆ

ಪ್ರಥಮ
ಪುರುಷ ಪ್ರೀತಿಯಾದ
ಅಪ್ಪನೇ
ಮಾಡಿದ ಬೋಣಿ
ತಪ್ಪಿಸಲು
ಪ್ರೀತಿಯ ಏಣಿ

ಹೀಗಿರುವಾಗ
ಇನ್ನೆಲ್ಲಿ ಸಿಕ್ಕೀತು
ಅಪೇಕ್ಷಿಸಿದ
ಪ್ರೀತಿಯ ದೋಣಿ ?

ಕೇಳೋಣವೆಂದರೆ
ಬ್ರಹ್ಮದೇವನ
ಹೇಳಿಯಾನು -
ನಾನೂ ಒಂದು
ಪುರುಷ ಪ್ರಾಣಿ!3 ಕಾಮೆಂಟ್‌ಗಳು:

Ittigecement ಹೇಳಿದರು...

ಅಪ್ಪನೂ..
ಉತ್ತಮ ಲೆಕ್ಕಿಗ...
ಮಗಳ ಭವಿಷ್ಯ...
ಜೀವನದ ಬಗೆಗೆ..
ಸುಖವಾಗಿರಲೆಂಬ ಲೆಕ್ಕಾಚಾರ....

ನಿಮ್ಮ ಕವನ ಇಷ್ಟವಾಯಿತು....

ಬಾಲು ಹೇಳಿದರು...

appa na lekkachara magala bhavishya sundara vagiralendu. brahmanigenu gottagabeku paapa avana maduveyannu thadeyalu yaaru illade iddaga!!!

kavana chennagide.

shivu.k ಹೇಳಿದರು...

ಪ್ರೀತಿಯ ಲೆಕ್ಕಾಚಾರದ ಕವನ ಸೊಗಸಾಗಿದೆ...

ಬೆಂಬಲಿಗರು