ಭಾನುವಾರ, ನವೆಂಬರ್ 29, 2009

ಪ್ರಜಾಪ್ರಭುತ್ವ

ಕೆಲವರ
ಮನೆಬಾಗಿಲು
ಪೇಪರು ಹುಡುಗನಿಗೆ
ಪೇಪರು ಹಾಕಲು

ಕೆಲವರ
ಮನೆಬಾಗಿಲು
ಬೆಳಗ್ಗೆದ್ದು
ನೀರು ಹಾಕಿ
ರಂಗೋಲಿ ಹಾಕಲು

ನಮ್ಮ ಮನೆಬಾಗಿಲು
ಪಕ್ಕದ ಬಿಲ್ಡಿಂಗಿನವಗೆ
ಸಿಗರೇಟು ತುಂಡುಗಳನು
ಬಿಸಾಕಲು !



ಶನಿವಾರ, ನವೆಂಬರ್ 28, 2009

ಪ್ರಶ್ನೆಗೊಂದು ಉತ್ತರ

ಪ್ರಶ್ನೆ: ಫೇಲ್ ಆಗ್ತೀನಿ ಅಂತ ಗೊತ್ತಿದ್ದೂ ಪರೀಕ್ಷೆಗೆ ಹೋಗ್ತೀ ಕಣೆ?
ಉತ್ತರ : ಪರೀಕ್ಷೆ ಭಯ ಹೋಗಲಿ ಅಂತ.

ಶುಕ್ರವಾರ, ನವೆಂಬರ್ 27, 2009


ಗುರುವಾರ, ನವೆಂಬರ್ 12, 2009


ಭಾನುವಾರ, ನವೆಂಬರ್ 8, 2009

ಸಾಧನೆ

ಬಾಡಿಗೆ ಮನೆ
ಬಿಟ್ಟು ಹೋಗುವಾಗ
ಮರುಗಬೇಡಿ -
ಆ ಮನೆಯಲ್ಲಿರುವಾಗ
ಮಾಡಿರುವುದು
ಸೊನ್ನೆ ಸಾಧನೆ!

ಇಂತ ಗೋಡೆಯಲಿ
ಆನಿ ಬಡಿದು
ನಿಲ್ಲಿಸಿದರಲ್ಲ
ಅದಕ್ಕೆ
ಸಲ್ಲಬೇಕಾಗಿದೆ
ಮನ್ನಣೆ!

ಹೀಗೂ ಆಗುತ್ತೆ

ಸಹಾಯ ಕೇಳಿದಾಗ
ಅಂತೀವಿ
ಅದಕ್ಕೇನು ಬಿಡು
ಬರೆಸಿಕೊಡ್ತೀನಿ
ಇಡೀ ಇಂಡಿಯಾ...

ಮತ್ತೊಮ್ಮೆ ಸಿಕ್ಕಾಗ
ಅಂತೀವಿ
ಒಹ್ !
ನೀನಿನ್ನೂ
ಇದ್ದೀಯ!

ಭಾನುವಾರ, ನವೆಂಬರ್ 1, 2009

ತಪ್ಪು

"ಪರರಲಿ ಕಂಡ
ತಪ್ಪು ನಿನ್ನಲ್ಲಿದ್ದರೆ
ಮೊದಲದನು ತೊಲಗಿಸು"
ಎಂಬ ನುಡಿಮುತ್ತು
ಓದಿದ್ದಳು ನಮ್ಮ ಮುತ್ತು!

***

ಪರರು ಮಾಡದ ತಪ್ಪುಗಳನು
ಜವಾಬ್ದಾರಿ/ಆತ್ಮಸಾಕ್ಷಿ
ನೆವದಲಿ
ಮನಃಪೂರ್ವಕವಾಗಿ
ಮಾಡುತ್ತಾ ಹೋದಳು

***

ಅಷ್ಟರಲಿ ಬೆಳಕು
ಹರಿದಿತ್ತು.
ಮಧ್ಯದಲಿ ಮುತ್ತು
ಪ್ರವಾಹದ ನೀರು
ಸುತ್ತುಮುತ್ತು.

***

ಬೆಂಬಲಿಗರು