ಸೋಮವಾರ, ಏಪ್ರಿಲ್ 27, 2009

ಒಪ್ಪಾ


ಕೊಲೆಗಳು

ಮಗುವನ್ನು
ಮನುಷ್ಯನನ್ನಾಗಿ
ಮಾಡಲು ಆಕೆಗೆ
ಬೇಕು ವರ್ಷಗಳು ಬಹಳ
ಅವನನ್ನು
ಕೊಂದು ಮುಗಿಸಲು
ದುರುಳರಿಗೆ
ಸಾಕೊಂದು ಜಗಳ !

ನೀವೇನಂತೀರಾ?


ಭಾನುವಾರ, ಏಪ್ರಿಲ್ 26, 2009

ಬರಹ

ಒಂದು ಬರಹವೆಂದರೆ
ಹಾಗಿರಬೇಕು
ನಿರೀಕ್ಷಿಸುವಂತೆ
ಪ್ರಿಯತಮ /
ಪ್ರಿಯತಮೆಯ
ಸನಿಹ

ಶುಕ್ರವಾರ, ಏಪ್ರಿಲ್ 24, 2009


ಮಿಂಚು

ನಿನ್ನಿಂದಾಗಿ
ಕನಸು ತಿರುಗಿದೆ
ಮನಸು ಅರಳಿದೆ

ಭೂತಕಾಲದಲಿ
ಮುನಿಸಿಗೆ ಕಾರಣರಾದವರ
ಮೇಲೆಲ್ಲಾ ಕೃತಜ್ಞತೆ
ಮೆಲ್ಲಗೆಮೆಲ್ಲಗೆ ಬರುತಿದೆ !

ನಿನ್ನೊಂದಿಗೆ
ಮನಸು ಹೆಜ್ಜೆ ಹಾಕುತಿದೆ

ಥಟ್ಟನೆ
ಹಣೆಯ ಮೇಲೆ
ಕೈ ಓಡುತಿದೆ
ನಿನ್ನ ಹೆಸರಲ್ಲಿದೆಯಾ
ಎಂದು ಇಣುಕಿ ಇಣುಕಿ
ನೋಡುತಿದೆ!!ಮಂಗಳವಾರ, ಏಪ್ರಿಲ್ 21, 2009

ಓಟ್


ಜೂನಿಯರ್ ಲಲ್ತಮ್ಮ


ಶುಕ್ರವಾರ, ಏಪ್ರಿಲ್ 17, 2009


ನೀವಾ......

ನಿಮ್ಮನು ಕಂಡಾಗ
ರಸ್ತೆಯ ಆ ಪಕ್ಕ

ಸಿಟ್ಟಿನೊಂದಿಗೆ
ಉಮ್ಮಳಿಸಿ ಬಂತು
ಹಳೆಯದೊಂದು ದುಃಖ

ಮಾತನಾಡಿಸಬೇಕೆನಿಸಲಿಲ್ಲ
ಬಂದು ನಿಮ್ಮ ಪಕ್ಕ !

ಪುನಃ ವಿವರಿಸಬೇಕಿಲ್ಲ
ನನಗೆ ನೀವು
ಕೊಟ್ಟ ದುಃಖ!!

ಬುಧವಾರ, ಏಪ್ರಿಲ್ 15, 2009

ಮಂಗಳವಾರ, ಏಪ್ರಿಲ್ 14, 2009

ಸಸ್ಯಕ್ರಾಂತಿ


ಆಹ್ಲಾದಕರ ವಾತಾವರಣ
ಹಾಗೆ summane


ಸೋಮವಾರ, ಏಪ್ರಿಲ್ 13, 2009

ಅಪ್ಪ - ಮಗ

ಮಗನೆ
ಈ ಸಲ ಓದದಿದ್ದರೆ
ಭಕ್ತ ಕುಂಭಾರದಲ್ಲಿ
ರಾಜ್ಕುಮಾರ್ ಮಗನ
ತುಳಿದ ಹಾಗೆ
ನಿನ್ನ ತುಳಿತೀನಿ

ಹೇ ಭಗವಂತ....
ಪರೀಕ್ಷೆ ಮುಗಿದ ಮೇಲೆ
ಪ್ರತ್ಯಕ್ಷ ಆಗಪ್ಪ
ಕೈಮುಗಿತೀನಿ!

ಮೂವತ್ತಾದ ಬಳಿಕ

ಮೂವತ್ತಾದ ಬಳಿಕ
ಜೀವನದ ಸಂಧಿಗಳು
ಅರಿವಾಗುತ್ತವೆ ...


ಮೂವತ್ತಾದ ಬಳಿಕ
ದೇಹದ ಸಂಧುಗಳೂ
ಪರಿಚಯ ಮಾಡಿಸಿಕೊಳ್ಳುತ್ತವೆ!!

ಮಂಗಳವಾರ, ಏಪ್ರಿಲ್ 7, 2009

ಸ್ವಾರ್ಥ

ಪ್ರೀತಿಯನ್ನು
ಅರಸಿ ಅರಸಿ
ಕೊನೆಗೆ
ಸಿಗುವ
ಶೇಷವಸ್ತು!

ಆಶ್ವಾಸನೆ

ಕೊಡುತಿರುತ್ತಾರೆ
ಆಶ್ವಾಸನೆ
ಕನವರಿಸುತ್ತಿರುತ್ತೇವೆ
ಬರುವವರೆಗೆ
ಅದರಿಂದ
ವಾಸನೆ

ತಪ್ಪು

ಪರರಲ್ಲಿ
ಕಂಡ ತಪ್ಪು
ನಮ್ಮಲ್ಲಿದ್ದರೆ
ಮಾಡೋಣ
ಮೊದಲದನ್ನು
ರಫ್ತು !

ಮೌನ

ಒಡೆದರೆ
ಒಂದೇ ಅರ್ಥ
ಕಟ್ಟಿಟ್ಟರೆ
ಸಾವಿರ ಅರ್ಥ !!

ಬೆಂಬಲಿಗರು