ಸೋಮವಾರ, ಮಾರ್ಚ್ 30, 2009

ಗಂಡನೂ ಫ್ಯಾನೂ

ಗಂಡನೂ ಫ್ಯಾನೂ
ಒಂದೇ ಅಲ್ಲವೇನೂ...

ಕೆಲವು ಫ್ಯಾನುಗಳು
ಮಾಡುತ್ತಿರುತ್ತವೆ
ಪರಪರ...

ಕೆಲವು ಫ್ಯಾನುಗಳು
ಗೊತ್ತೇ ಮಾಡುವುದಿಲ್ಲ
ಭುವಿಯಲ್ಲಿದೆ ಎಂದು
ತಮ್ಮ ಇರ....

ಪರರ ಪರಪರದಿಂದ
ಎಚ್ಚತ್ತುಕೊಳ್ಳುವ ,
echchattukonDaruu
ನಿಟ್ಟುಸಿರಿಟ್ಟು ಸುಮ್ಮನಾಗುವ
ಅಸಹಾಯಕರು...

ಶುಕ್ರವಾರ, ಮಾರ್ಚ್ 27, 2009

ಕನಸು

ಕನಸ ಹುಟ್ಟುಹಾಕಲು
ಬಹುಮಂದಿಯು
ನನಸಾಗಿಸಲು
ಹೋದರಾಗುವುದು
ಮನಸೊಂದು ಚಿಂದಿಯು!

ಬುಧವಾರ, ಮಾರ್ಚ್ 25, 2009


ದುನಿಯಾ

ದುನಿಯಾದ
ಲಾಂಗು ಮಚ್ಚುಗಳಿಂದ
ಹಿಡಿದು ಹುಚ್ಚು
ಸಾಹಿತ್ಯ ಲೋಕಕ್ಕೆ
ಒಳಹೊಕ್ಕರೆ ಅಲ್ಲೂ
ಅಕ್ಷರ-ಅಕ್ಷರಗಳಿಂದ
ಹಿಡಿದಿಡಿದು ಚುಚ್ಚು !!

ಬುಧವಾರ, ಫೆಬ್ರವರಿ 25, 2009

ಗಾಳಿಪಟ

ಅವ..... ಭರವಸೆಯ
ವಿಷಯದಲ್ಲಿ
ಸಂಪೂರ್ಣ ಲಂಪಟನೆಂದು
ತಿಳಿದ ಕ್ಷಣ
ನಾನು ಅಲ್ಲಿಂದ ಜಾರಿದೆ...

ಪ್ರತಿಕ್ಷಣ ನೀನು ಸಹಕರಿಸುವೆಯೆಂಬ
ಭ್ರಮೆಯಲ್ಲಿ ನಿನ್ನೊಡನೆ
ನಾನುಸಿರಿದೆಲ್ಲವ ಪಟಪಟ

ಹಣೆಬರಹ ನೋಡು
ಅವರಿವರಿಗೆಲ್ಲ
ಸಹಕರಿಸಿದ ನೀನು
ನನ್ನ ವಿಷಯದಲ್ಲಿ
ನೀನುನೂ ಮುನಿಯಾದೆ ....

ಹೀಗೊಂದು ಗಾಳಿಪಟ

ಶನಿವಾರ, ಜನವರಿ 24, 2009

(ಸಂಗ್ರಹ )


ಓ ಒಲವಿನ ಸಹೋದರಿ / ಸಹೋದರ

ಬಾಳಿನ ವಿಷಾದಗಳ ಮರೆತೊಮ್ಮೆ

ನಗೆಮಿಂಚು ಚೆಲ್ಲು ; ಕತ್ತಲಿನ ಕೋಲ್ಮಿಂಚಿನಂತೆ

ಕಷ್ಟದ ಜೀವನ ಅಲ್ಲ ನಿನಗೆ ಮಾತ್ರ

ದುಃಖ ಬೇಸರ ನೋವುಗಳದೆ ಪಾತ್ರ

ನಿನ್ನವರು ಇಲ್ಲಿ ಜೊತೆಗಾರರಲ್ಲ

ಅವರ ನಡುವೆ ಸಂತಸವ ಹುಡುಕುವುದರಲ್ಲಿ ಅರ್ಥವಿಲ್ಲ .

ಎಸೆದ ಕಲ್ಲು ಮುಳ್ಳುಗಳ ಹೆಕ್ಕಿ ಅಯಿಕೋ

ನಡೆವ haadi ಸುಗಮವಾಗಲು

ಯಶದ ಒಂದು ಮೆಟ್ಟಿಲೆಂದು ಭಾವಿಸಿಕೋ

ಅಂದಕಾರವ ನಕ್ಕು ಸ್ವಾಗತಿಸು

ದೀಪ ಹಚ್ಚಿ ಜಗವ ಸಾಧಿಸು

ಗುರಿಯೊಂದು ವಿಶಾಲ ಸಾಗರ

ಪ್ರಯತ್ನದಿಂದ ಸಿಗುವ ಸುಖದ ಆಗರ,

ಗಿಡಗಳನ್ನು ಬಗ್ಗಿಸುವ ಬಿರುಗಾಳಿಯು

ಕಲ್ಲುಕಂಬಗಳ ನಡುಗಿಸಬಲ್ಲುದೆ?

ತನ್ನೊಳಗಿನ ಮಣ್ಣು ಸಾಗಿಸುವ

ನದಿಯು ಬಂಡೆಗಳ ಸಾಗಿಸಬಲ್ಲುದೆ?

ತಲೆಕೆಳಗಾಗಿ ಹಿಡಿದರೂ

ಜ್ವಾಲೆ ಊರ್ಧ್ವಮುಖಿಯಲ್ಲ್ವೇ?

ಸಾಧಕನ ಪ್ರಯತ್ನ ಎಂಥ ತಪ್ತದಲ್ಲೂ

ಸಾಧನೆಯ ಕಡೆಗಲ್ಲವೇ ಸಹೋದರಿ/ಸಹೋದರ?

ಮಂಗಳವಾರ, ಡಿಸೆಂಬರ್ 16, 2008

ಭಾವನೆಗಳು

ಭಾವನೆಗಳೇ ಜೀವ

ಎನ್ನಲೊಂದು ಕಾಲ

ಭಾವನೆಗಳು ಬರdu

ಎನ್ನಲೊಂದು ಕಾಲ

ಎಲ್ಲದಕ್ಕೂ ಮಾನವನ

ಮನಸ್ಸೇ moola

ಬೆಂಬಲಿಗರು